ಪುಟಗಳು

ಸೋಮವಾರ, ಜೂನ್ 20, 2011

ಮೆಂತ್ಯೆ ಸೊಪ್ಪಿನ ಸಾಂಬಾರು


ತೊಗರಿಬೇಳೆ 1 ಕಪ್
ಮೆಂತ್ಯೆ ಕಟ್ಟು 2
ಹಸಿಮೆಣಸು 2
ಈರುಳ್ಳಿ  2
ಟೊಮೆಟೊ 2
ಸಾಂಬಾರ್ ಹುಡಿ 2 ಚಮಚ
ಅರಸಿನ 1/4 ಚಮಚ
ತುಪ್ಪ 1 ಚಮಚ
ಎಣ್ಣೆ 2 ಚಮಚ
ಸಾಸಿವೆ 1/4 ಚಮಚ
ಕರಿಬೇವು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು

ಮೊದಲಿಗೆ ಬೇಳೆ ತೊಳೆದು, 2 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಬೇಳೆ ಚೆನ್ನಾಗಿ ಬೆಂದಿರಬೇಕು. ಬಾಣಲೆಗೆ ಎಣ್ಣೆ, ತುಪ್ಪ ಹಾಕಿ, ಕಾದ ನಂತರ  ಸಾಸಿವೆ, ಕರಿಬೇವು, ಹಸಿಮೆಣಸು, ಉದ್ದಕ್ಕೆ ತುಂಡರಿಸಿದ ಈರುಳ್ಳಿ ಹಾಕಿ ಕಲಸಿ, ಈರುಳ್ಳಿ ಕಂದು ಬಣ್ಣ ಬಂದ ನಂತರ ಕಟ್ ಮಾಡಿದ ಟೊಮೆಟೊ, ಸ್ವಲ್ಪ ಉಪ್ಪು ಹಾಕಿ ಕಲಸಿ ಮುಚ್ಚಿಡಿ (2 ನಿಮಿಷ). ಮತ್ತೆ ಇದಕ್ಕೆ ಶುಚಿ ಮಾಡಿ ಕತ್ತರಿಸಿಟ್ಟುಕೊಂಡ ಮೆಂತ್ಯೆ ಸೊಪ್ಪು ಹಾಕಿ ಚೆನ್ನಾಗಿ ಕಲಸಿ, ಸ್ವಲ್ಪ ಬೇಯಲು ಬಿಡಿ, ಬೆಂದ ನಂತರ ಇದಕ್ಕೆ ಸಾಂಬಾರ್ ಹುಡಿ, ಅರಸಿನ ಮತ್ತು 2 ಕಪ್ ನೀರು, ಬೇಯಿಸಿದ ಬೇಳೆ ಹಾಕಿ ಕಲಸಿ 2 ನಿಮಿಷ ಕುದಿಸಿ ಇಳಿಸಿ. (ಇದು ತುಂಬಾ ನೀರು ಆಗಬಾರದು). ಇದು ಅನ್ನಕ್ಕೆಚಪಾತಿಗೆ ಒಳ್ಳೆಯದಾಗುತ್ತದೆ.
ಮೆಂತ್ಯೆ ಸೊಪ್ಪು ಸಿಗದಿದ್ದರೆ ಪಾಲಕ್ ಸೊಪ್ಪು ಉಪಯೋಗಿಸಬಹುದು. 

1 ಕಾಮೆಂಟ್‌:

  1. ಜಮುನಕ್ಕ..ಸೂಪರ್..ತುಂಬಾ ಇಷ್ಟ ಆಯ್ತು..ನಾನು ಪಾಲಕ್ ಸಾಂಬಾರ್ ಯಾವಾಗ್ಲೂ ಮಾಡ್ತಾ ಇರ್ತೀನಿ..ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ