ಪುಟಗಳು

ಗುರುವಾರ, ಫೆಬ್ರವರಿ 17, 2011

ಪಡವಲಕಾಯಿ ಕೂಟು, ಬದನೆಕಾಯಿ ಚಟ್ನಿ


ಪಡವಲಕಾಯಿ ಕೂಟು

ಹೆಸರುಬೇಳೆ  1 ಕಪ್
ಪಡವಲಕಾಯಿ 2 ಕಪ್ (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ 1 (ಸಣ್ಣಗೆ ಹೆಚ್ಚಿದ್ದು)
ಈರುಳ್ಳಿ 1  (ಸಣ್ಣಕ್ಕೆ ಹೆಚ್ಚಿದ್ದು)
ಹಸಿಮೆಣಸು 2 (ಉದ್ದಕ್ಕೆ ಹೆಚ್ಚಿದ್ದು)
ಶುಂಠಿ 2 ಇಂಚು (ಉದ್ದಕ್ಕೆ ಹೆಚ್ಚಿದ್ದು)
ಮೆಣಸಿನ ಹುಡಿ 1 ಚಮಚ
ಧನಿಯ ಪುಡಿ 2 ಚಮಚ
ಅರಸಿನ 1/4 ಚಮಚ
ಎಣ್ಣೆ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ ಸ್ವಲ್ಪ

ಹೆಸರುಬೇಳೆ ಶುದ್ಧ ಮಾಡಿ 2 ಕಪ್ ನೀರು ಹಾಕಿ ಪಾತ್ರೆಯಲ್ಲಿ ಬೇಯಲು ಇಡಿ. ಪಡವಲಕಾಯಿ ಅರ್ಧ ಇಂಚು ಉದ್ದಕ್ಕೆ ಕತ್ತರಿಸಿ ಬೇಳೆಯಲ್ಲಿ ಹಾಕಿ, ಇದರಲ್ಲಿ ಅರಸಿನ, ಉಪ್ಪು ಹಾಕಿ, ಬೆಂದ ನಂತರ ಬೆಂಕಿ ನಂದಿಸಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಹಸಿಮೆಣಸು, ಹಸಿಶುಂಠಿ, ಕರಿಬೇವು, ಈರುಳ್ಳಿ ಹಾಕಿ fry ಮಾಡಿ, ನಂತರ ಟೊಮೆಟೊ ಹಾಕಿ ಚೆನ್ನಾಗಿ ಕಲಸಿ, ಉಪ್ಪು ಹಾಕಿ 2 ನಿಮಿಷ ಮುಚ್ಚಿಡಿ. ನಂತರ ಮೆಣಸಿನ ಹುಡಿ, ಧನಿಯ ಹುಡಿ ಹಾಕಿ. ಈಗ ಬೆಂದ ಹೆಸರುಬೇಳೆ, ಪಡವಲಕಾಯಿಯನ್ನು ತೆಗೆದು (ನೀರಿಲ್ಲದೆ) ಒಗ್ಗರಣೆ ಪಾತ್ರೆಗೆ ಹಾಕಿ 2 ನಿಮಿಷ ಕಲಸಿ. ಕೊನೆಗೆ ಹೆಸರುಬೇಳೆ ಬೇಯಿಸಿದ ನೀರು ಹಾಕಿ ಒಮ್ಮೆ ಕುದಿಸಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಕಿ ಕಲಸಿ ಇಳಿಸಿ.
ಚಪಾತಿಗೆ, ಅನ್ನಕ್ಕೆ ಚೆನ್ನಾಗಿರುತ್ತದೆ.

ಬದನೆಕಾಯಿ ಚಟ್ನಿ 

ಬದನೆ 1 (ಉದ್ದದ ಹಸಿರು)
ಸಣ್ಣ ಈರುಳ್ಳಿ 5
ಟೊಮೆಟೊ 1
ಹಸಿಮೆಣಸು 2
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉದ್ದಿನಬೇಳೆ 1/4 ಚಮಚ
ಸಾಸಿವೆ 1/4 ಚಮಚ
ಎಣ್ಣೆ 2 ಚಮಚ
ಬೆಲ್ಲ ಚೂರು

ಮೊದಲಿಗೆ ಪಾತ್ರೆಯಲ್ಲಿ 1 ಕಪ್ ನೀರು ಹಾಕಿ, ಇದರಲ್ಲಿ ಕತ್ತರಿಸಿದ ಬದನೆಕಾಯಿ, ಶುದ್ಧ ಮಾಡಿದ ಈರುಳ್ಳಿ, 2 ಭಾಗ ಮಾಡಿದ ಟೊಮೆಟೊ, ಹಸಿಮೆಣಸು ಹಾಕಿ 5 ನಿಮಿಷ ಬೇಯಿಸಿ, ಬೆಂಕಿ ನಂದಿಸಿ, ತಣಿಸಿ. ತಣಿದ ನಂತರ ಟೊಮೆಟೊ ಸಿಪ್ಪೆ ತೆಗೆದು, ಎಲ್ಲವನ್ನು ನೀರಿಲ್ಲದೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.  Pan ನಲ್ಲಿ ಉದ್ದು, ಕರಿಬೇವು fry ಮಾಡಿ. ಈಗ ಇದಕ್ಕೆ ರುಬ್ಬಿದ್ದನ್ನು ಮತ್ತು ತರಕಾರಿ ಬೇಯಿಸಿ ಉಳಿದ ನೀರು ಹಾಕಿ, ಮತ್ತೆ ಉಪ್ಪು, ಬೆಲ್ಲ ಹಾಕಿ ಕುದಿಸಿ, ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ.
ಇದು ಇಡ್ಲಿಗೆ, ದೋಸೆಗೆ, ಅನ್ನಕ್ಕೆ ಚೆನ್ನಾಗಿರುತ್ತದೆ.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ