ಪುಟಗಳು

ಗುರುವಾರ, ಫೆಬ್ರವರಿ 03, 2011

ಬದನೆ ಎಣ್ಣೆಗಾಯಿ, ಸಿಂಪ್ಲ್ ದಾಲ್



ಬದನೆ ಎಣ್ಣೆಗಾಯಿ

ಸಣ್ಣ  ಗುಂಡು ಬದನೆ 4
ತೆಂಗಿನತುರಿ 1 ಕಪ್
ಈರುಳ್ಳಿ ದೊಡ್ಡದು 1
ಟೊಮೆಟೊ 1
ಹಸಿಮೆಣಸು 2
ಹುಣಿಸೆಹಣ್ಣಿನ ರಸ 2 ಚಮಚ
ಮೆಣಸಿನ ಹುಡಿ 1 ಚಮಚ
ಅರಸಿನ ಹುಡಿ 1/4 ಚಮಚ
ಧನಿಯ ಹುಡಿ 1 ಚಮಚ
ಶುಂಠಿ 1 ಇಂಚು
(ಬೇಕಾದರೆ ಬೆಳ್ಳುಳ್ಳಿ 2 ಎಸಳು)
ಎಣ್ಣೆ 6 ಚಮಚ
ಸಾಸಿವೆ 1/4 ಚಮಚ
ಗೋಡಂಬಿ 4
ರುಚಿಗೆ ತಕ್ಕಷ್ಟು ಉಪ್ಪು

ಮೊದಲಿಗೆ ಸ್ಟೌವ್ ಹಚ್ಚಿ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿಡಿ, ಇದು ಕಾದ ನಂತರ ಹಸಿಮೆಣಸು, ಹೆಚ್ಚಿದ ಈರುಳ್ಳಿ, ಶುಂಠಿ (ಬೇಕಾದರೆ ಬೆಳ್ಳುಳ್ಳಿ) ಹಾಕಿ ಹುರಿಯಿರಿ. ಮತ್ತೆ ಇದಕ್ಕೆ ತೆಂಗಿನತುರಿ, ಟೊಮೆಟೊ ಹಾಕಿ ಸ್ವಲ್ಪ ಹುರಿಯಿರಿ. ಈಗ ತಣಿಯಲು ಬಿಡಿ. ನಂತರ ಹುರಿದಿಟ್ಟ ಸಾಮಾಗ್ರಿಯ ಜೊತೆಗೆ ಹುಣಿಸೆ ರಸ, ಮೆಣಸಿನ ಹುಡಿಅರಸಿನ, ಧನಿಯ ಹುಡಿ, ಉಪ್ಪು, ಗೋಡಂಬಿ ಎಲ್ಲವನ್ನು ಮಿಕ್ಸಿಗೆ ಹಾಕಿ ನುಣ್ಣಗೆ, ಗಟ್ಟಿಯಾಗಿ ರುಬ್ಬಿಕೊಳ್ಳಿ (ಬೇಕಾದಲ್ಲಿ ಚೂರು ನೀರು ಹಾಕಿ). ಬದನೆಕಾಯಿಗಳನ್ನು
ಮುಕ್ಕಾಲು ಅಂಶದವರೆಗೆ ನಾಲ್ಕು ಭಾಗ ಸೀಳಿ, ಅದರಲ್ಲಿ ರುಬ್ಬಿದ ಮಸಾಲೆ ತುಂಬಿಸಿಟ್ಟುಕೊಳ್ಳಿ. ಮತ್ತೆ ನಾನ್ ಸ್ಟಿಕ್ ಪಾತ್ರೆಯಲ್ಲಿ 4 ಚಮಚ ಎಣ್ಣೆ ಹಾಕಿರಿ, ಕಾದ ನಂತರ ಸಾಸಿವೆ ಹಾಕಿ ಸಿಡಿಸಿ, ನಂತರ ಮಸಾಲೆ ತುಂಬಿಸಿಟ್ಟಿದ್ದ ಬದನೆಕಾಯಿಯನ್ನು ಮೆಲ್ಲಗೆ ಎಣ್ಣೆಗೆ ಹಾಕಿ ಮುಚ್ಚಿಡಿ, ಕಡಿಮೆ ಬೆಂಕಿಯಲ್ಲಿ 5 ನಿಮಿಷ ಬೇಯಿಸಿ. ಮತ್ತೆ ಸ್ವಲ್ಪ (2-3 ಚಮಚ) ನೀರು ಹಾಕಿ ಮುಚ್ಚಿಡಿ, ಮತ್ತೆ 3 ನಿಮಿಷ ಬೇಯಿಸಿ, ಈಗ ಉಳಿದ ಮಸಾಲೆಯನ್ನು ಪ್ಯಾನ್ ಗೆ ಹಾಕಿ ಮೀಡಿಯಂ ಬೆಂಕಿಯಲ್ಲಿ ಬೇಯಿಸಿ1 ಕಪ್ ನೀರು ಹಾಕಿ, ಕಲಸಿ. ಆನಂತರ ಕುದಿಸಿ, ಇಳಿಸಿ.
ಎಣ್ಣೆಗಾಯಿ ಸ್ವಲ್ಪ ಗಟ್ಟಿಯಾಗಿರಬೇಕು, ಬಿಸಿ ಅನ್ನಕ್ಕೆ, ಚಪಾತಿಗೆ fantastic!! (ಹೆಸರೇ ಹೇಳುವ ಹಾಗೆ ಎಣ್ಣೆಗಾಯಿ ಅಂದರೆ, ಸ್ವಲ್ಪ ಎಣ್ಣೆ ಹೆಚ್ಚು ಹಾಕಿದರೇ ಚೆನ್ನ)

ಸಿಂಪ್ಲ್ ದಾಲ್

ತೊಗರಿಬೇಳೆ 1 ಕಪ್
ಟೊಮೆಟೊ 2 (ಸಣ್ಣಕ್ಕೆ ಹೆಚ್ಚಿಕೊಳ್ಳಿ)
ಹಸಿಮೆಣಸು 3 (ಉದ್ದಕ್ಕೆ ಹೆಚ್ಚಿಕೊಳ್ಳಿ)
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಜೀರಿಗೆ 1/2 ಚಮಚ
ಶುಂಠಿ 1 ಇಂಚು (ಪೇಸ್ಟ್ ಅಥವಾ ಜಜ್ಜಿದ್ದು)
(ಬೇಕಾದರೆ ಬೆಳ್ಳುಳ್ಳಿ 2 ಜಜ್ಜಿದ್ದು ಅಥವಾ ಪೇಸ್ಟ್)
ಅರಸಿನ 1/4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ  1 ಚಮಚ
ತುಪ್ಪ 1 ಚಮಚ

ಮೊದಲಿಗೆ ಬೇಳೆಯನ್ನು 2 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಬೇಳೆ ಬೆಂದ ನಂತರ ಪೇಸ್ಟ್ ತರಹ ಇರಬೇಕುಪ್ಯಾನ್ ನಲ್ಲಿ ಎಣ್ಣೆ, ತುಪ್ಪ ಹಾಕಿ ಕಾದ ನಂತರ ಸಾಸಿವೆ, ಹಸಿಮೆಣಸು, ಜೀರಿಗೆ, ಕರಿಬೇವು, ಶುಂಠಿ (ಬೇಕಾದರೆ ಬೆಳ್ಳುಳ್ಳಿ) ಹಾಕಿ ಹುರಿಯಿರಿನಂತರ ಟೊಮೆಟೊ, ಉಪ್ಪು, ಅರಸಿನ ಹಾಕಿ ಚೆನ್ನಾಗಿ ಕಲಸಿ 3 ನಿಮಿಷ ಮುಚ್ಚಿಡಿ. ನಂತರ ಬೇಯಿಸಿಟ್ಟುಕೊಂಡ ಬೇಳೆ ಹಾಕಿ ಚೆನ್ನಾಗಿ ಕಲಸಿ (ತುಂಬಾ ಗಟ್ಟಿ ಅನಿಸಿದರೆ ಸ್ವಲ್ಪ ನೀರು ಹಾಕಬಹುದು). ನಂತರ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಕುದಿಸಿ ಇಳಿಸಿ.
(ದಾಲ್ ತುಂಬಾ ನೀರಾಗಬಾರದು, ಅನ್ನಕ್ಕೆ, ಚಪಾತಿಗೆ, ದೋಸೆಗೆ ಚೆನ್ನಾಗಿರುತ್ತದೆ, ಒಗ್ಗರಣೆ ಮೀಡಿಯಂ ಬೆಂಕಿಯಲ್ಲಿ  ಮಾಡಿದರೆ ಒಳ್ಳೆಯದು)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ